‘ಚೌಕಟ್ಟು’ ಚಿತ್ರದ ನಾಯಕಿ ಸವಿ ಮಾದಪ್ಪ ಡೆತ್ ನೋಟ್ ಬರೆದಿಟ್ಟು ಸೂಸೈಡ್..!

ದೊಡ್ಡಬೆಲೆ ಅಪಾರ್ಟ್‌ಮೆಂಟ್‌ನಲ್ಲಿ ಸವಿ ಮಾದಪ್ಪ(25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬಾಯ್‌ಫ್ರೆಂಡ್ ವಿವೇಕ್ ಜತೆ ವಾಸವಿದ್ದರು. ಸವಿ ಮಾದಪ್ಪ ಊಟ ತರುವಂತೆ ಬಾಯ್‌ಫ್ರೆಂಡ್‌ಗೆ ಹೇಳಿದ್ದರು. ವಿವೇಕ್ ಊಟ ತರೋಕೆ ಹೊರಗೆ ಹೋಗಿದ್ದರು. ಈ ವೇಳೆ ಸವಿ ಮಾದಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸವಿ ಮಾದಪ್ಪ ಕೊಡಗು ಜಿಲ್ಲೆಯ ಕುಶಾಲನಗರ ಮೂಲದವರು. ‘ಚೌಕಟ್ಟು’, ‘ಫನ್’ ಸಿನಿಮಾದಲ್ಲಿ ನಟಿಸಿದ್ದರು. ಆತ್ಮಹತ್ಯಗೆ ನಿಖರ ಕಾರಣ ತಿಳಿದು ಬಂದಿಲ್ಲ ಆದರೆ ಡೆತ್ ನೋಟ್ ಅಲ್ಲಿ “ನನಗೆ ಸಾಯಲು ಇಷ್ಟವಿಲ್ಲಾ ಆದರೂ ನನ್ನ ಕೈಲಿ ಆಗ್ತಿಲ್ಲಾ ಅಮ್ಮ ಅಪ್ಪ ನನ್ನನ್ನು ಕ್ಷಮಿಸಿ” ಎಂದು ಬರೆದಿದ್ದಾರೆ.