ಚೆನೈ ನಲ್ಲಿ ಬಹುದಿನದ ಗೆಳೆಯನನ್ನ ಭೇಟಿ ಮಾಡಿದ ಹ್ಯಾಟ್ರಿಕ್ ಹೀರೋ

ಸ್ಯಾಂಡಲ್ ವುಡ್ ನಲ್ಲಿನ ಆಕ್ಟಿವ್ ಹೀರೋ ದ್ರೆ ಅದು ಶಿವರಾಜ್ ಕುಮಾರ್ …ಸದಾ ಸಿನಿಮಾಗಳಲ್ಲಿ ಬ್ಯುಸಿ ಇರೋ ಶಿವರಾಜ್ ಕುಮಾರ್ ಸ್ವಲ್ಪ ಬಿಡುವಿದ್ದರೂ ಕೂಡ ಆ ಸಮಯದಲ್ಲಿಯೂ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡುಬಿಡ್ತಾರೆ…ಇತ್ತೀಚೆಗಷ್ಟೇ ನಟ ಶಿವರಾಜ್ ಕುಮಾರ್ ತಮ್ಮಬಹು ದಿನದ ಗೆಳೆಯರಾದ ಸ್ಟಾಲಿನ್ ಅವ್ರನ್ನ ಮೀಟ್ ಮಾಡಿದ್ದಾರೆ…

ಚೆನ್ನೈ ನಲ್ಲಿ ಸ್ಟ್ಯಾಲಿನ್ ರನ್ನ ಭೇಟಿಯಾದ ಶಿವರಾಜ್ ಕುಮಾರ್…ಚೆನೈ ಗೆ ಸ್ನೇಹಿತನ ಮಗಳ ಮದುವೆಗೆ ತೆರಳಿದ್ದರು ಇದೇ ಸಮಯದಲ್ಲಿ ಶಿವರಾಜ್ ಕುಮಾರ್ ದಂಪತಿ ತಮಿಳುನಾಡಿನ ಸಿಎಂ ಅವ್ರನ್ನ ಭೇಟಿ ಮಾಡಿದ್ದಾರೆ.

ಮುಖ್ಯಮಂತ್ರಿಯಾಗಿರೋ ಸ್ಟಾಲಿನ್ ಹಾಗೂ ಶಿವರಾಜ್ ಕುಮಾರ್ ಬಹುದಿನದ ಗೆಳೆಯರು…ಚೆನೈನಲ್ಲಿ ಓದುತ್ತಿದ್ದ ಸಮಯದಲ್ಲಿ ಸ್ಟಾಲಿನ್ ಹಾಗೂ ಶಿವಣ್ಣ ಇಬ್ಬರು ಕ್ಲಾಸ್
ಮೇಟ್ಸ್ ಆಗಿದ್ದರು …ಸ್ಟಾಲಿನ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡೋ ಕಾರ್ಯಕ್ರಮಕ್ಕೂ ಶಿವರಾಜ್ ಕುಮಾರ್ ಅವ್ರಿಗೆ ಆಹ್ವಾನವಿತ್ತು…ಇನ್ನು ಸ್ನೇಹಿತ ಸಿಎಂ ಆದಾಗ ಫೋನ್ ಕರೆ ಮಾಡಿ ಶುಭ ಹಾರೈಸಿದ್ರು ಶಿವರಾಜ್ ಕುಮಾರ್ …ಈಗ ಸ್ನೇಹಿತನಮಗಳ ಮದುವೆ ಮುಗಿಸಿ ಬರುವಾಗ ಬಹುದಿನದ ಸ್ನೇಹಿತನನ್ನ ಭೇಟಿ ಮಾಡಿ ಕ್ಷೇಮ ವಿಚಾರಿಸಿದ್ದಾರೆ….
