News

ಚಿತ್ರಮಂದಿರ ಭರ್ತಿಗೆ ಸಿಕ್ತು ಗ್ರೀನ್ ಸಿಗ್ನಲ್: ಅಕ್ಟೋಬರ್ 1 ರಿಂದ ಸಿನಿಮಾ ಹಬ್ಬ

ಚಿತ್ರಮಂದಿರ ಭರ್ತಿಗೆ ಸಿಕ್ತು ಗ್ರೀನ್ ಸಿಗ್ನಲ್: ಅಕ್ಟೋಬರ್ 1 ರಿಂದ ಸಿನಿಮಾ ಹಬ್ಬ
  • PublishedSeptember 24, 2021

ಇಡೀ ಸ್ಯಾಂಡಲ್ ವುಡ್, ಕನ್ನಡ ಸಿನಿಮಾ ರಂಗ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಸಮಯ ಈಗ ಬಂದಿದೆ. ಕೊರೊನಾ ಸೋಂಕಿನ ಕಾರಣ ಕಳೆದ ಎರಡು ವರ್ಷದಿಂದ ಥಿಯೇಟರ್ ಗಳು ಬಾಗಿಲು ಮುಚ್ಚಿದ್ದವು, ಎರಡನೆ ಅಲೆ ಬಂದ ನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದವು ಈಗ 2ನೇ ಅಲೆ ನಿಯಂತ್ರಣಕ್ಕೆ ಬಂದಿದ್ದು ಚಿತ್ರ ರಂಗ ಶೇ100% ಅವಕಾಶಕ್ಕಾಗಿ ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿಗಳನ್ನು ನೀಡುತ್ತಾ ಬಂದಿತ್ತು ಆದರೆ ಸರ್ಕಾರ ಶೇ 50% ಭರ್ತಿಗೆ ಮಾತ್ರ ಅವಕಾಶ ನೀಡಿತ್ತು.

ಈ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸುವಂತೆ ಕನ್ನಡ ಚಿತ್ರರಂಗದ ನಿರ್ಮಾಪಕರು ಮನವಿ ಮಾಡಿಕೊಂಡಿದ್ದರು. ಈ ಸಂಬಂಧ ‘ಭಜರಂಗಿ 2’ ಚಿತ್ರದ ನಿರ್ಮಾಪಕ ಜಯಣ್ಣ, ಸಲಗ ಸಿನಿಮಾ ನಿರ್ಮಾಪಕ ಕೆ.ಪಿ. ಶ್ರೀಕಾಂತ್​, ಕೋಟಿಗೊಬ್ಬ 3 ಚಿತ್ರಕ್ಕೆ ಬಂಡವಾಳ ಹೂಡಿರುವ ಸೂರಪ್ಪ ಬಾಬು ಸೇರಿದಂತೆ ಹಲವರ ಜೊತೆ ಸಚಿವ ಸುಧಾಕರ್​ ಸಭೆ ನಡೆಸಿದ್ದರು. ಇದಾದ ಬೆನ್ನಲ್ಲೇ ಹೌಸ್​ಫುಲ್​ಗೆ ಅವಕಾಶ ಸಿಕ್ಕಿದೆ. ಈಗ ಸರ್ಕಾರ ಹೊಸ ಆದೇಶದಲ್ಲಿ ಅಕ್ಟೋಬರ್ 1 ರಿಂದ ಶೇ 100% ಭರ್ತಿಗೆ ಅವಕಾಶ ನೀಡಿದ್ದು ಕೆಲವು ಶರತ್ತುಗಳನ್ನು ವಿಧಿಸಿದೆ.

  1. ಮೊದಲ ಡೋಸ್ ಲಸಿಕೆ ಕಡ್ಡಾಯವಾಗಿ ಆಗಿರಬೇಕು.
  2. ಪಾಸಿಟೀವ್ ಕೇಸ್ ಹೆಚ್ಚಿರುವ ಜಿಲ್ಲೆಗಳಲ್ಲಿ ಶೇ 50% ಮಾತ್ರ ಅವಕಾಶ.
  3. ಚಿತ್ರಮಂದಿರಗಳಿಗೆ ಗರ್ಭಿಣಿ ಮತ್ತು ಮಕ್ಕಳಿಗೆ ಅವಕಾಶವಿಲ್ಲ.
Written By
Kannadapichhar

Leave a Reply

Your email address will not be published. Required fields are marked *