ಗೇಟ್ ಮುಂದೆ ಕಾಯ್ತಿದ್ದ ಫ್ಯಾನ್ಸ್’ಗೆ ಸಿಹಿ ಹಂಚಿದ ಶಿವಣ್ಣ..

ಇಂದು ಪುನೀತ್ ರಾಜಕುಮಾರ್ ಅವರ 11 ನೇ ದಿನದ ಪೂಜಾ ಕಾರ್ಯ ನೆರೆವೇರಿದ್ದು. ಅಣ್ಣಾವ್ರ ಕುಟುಂಬಸ್ಥರೆಲ್ಲರೂ ಸೇರಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಮುಂದಾಳತ್ವದಲ್ಲಿ 11 ನೇ ದಿನದ ಕಾರ್ಯ ನೆರವೇರಿದೆ. ರಾಘವೇಂದ್ರ ರಾಜ್‌ಕುಮಾರ್ ಅವರ ಇಬ್ಬರು ಮಕ್ಕಳು ಬಿರುಸಿನಿಂದ ಓಡಾಡುತ್ತಾ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.
11ನೇ ದಿನವೂ ಕೂಡ ಪುನೀತ್ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ರು. ಅಪ್ಪು ಸಮಾಧಿಗೆ ನಮಿಸಲು ಗೇಟಿನ ಬಳಿಯೇ ಕಾಯುತ್ತಿದ್ರು, ಆದ್ರೆ ದೊಡ್ಮನೆ ಕುಟುಂಬಸ್ಥರ ಪೂಜಾ ಕಾರ್ಯ ಮುಗಿಯುವವರೆಗೂ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಪೂಜೆ ಮುಗಿಸಿ ಹೊರಗೆ ಬಂದ ಶಿವಣ್ಣ ಅಭಿಮಾನಿಗಳಿಗೆ ಸಿಹಿ ಹಂಚಿ ಸದಾಶಿವನಗರದ ಮನೆಗೆ ತೆರಳಿದರು.
ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಮಕ್ಕಳಾದ ವಂದಿತಾ ಹಾಗೂ ಧೃತಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿರುವ ವಂದಿತಾಗೆ ಇಂದು ಪರೀಕ್ಷೆ ಇದ್ದು. ಅಪ್ಪನಿಗೆ ಪೂಜೆ ಸಲ್ಲಿಸಿ ವಂದಿತಾ ಪರೀಕ್ಷೆಗೆ ತೆರಳಿದ್ದಾರೆ. ಶಿವರಾಜ್ ಕುಮಾರ್ ದಂಪತಿ ಅವರ ಮಕ್ಕಳು ಸಹ ಸಮಾಧಿ ಪೂಜೆ ಸಲ್ಲಿಸಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್ ಸಹೋದರ ಚಿನ್ನೇಗೌಡ ಕುಟುಂಬ, ಅವರ ಮಕ್ಕಳಾದ ಶ್ರೀಮುರಳಿ, ರಾಘವೇಂದ್ರ ರಾಜ್‌ಕುಮಾರ್, ರಾಮ್ ಕುಮಾರ್ ಕುಟುಂಬ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
****