ಕ್ರಿಕೇಟ್ ಆಡಿ, ಬಿರಿಯಾನಿ ಬೇಯಿಸಿದ ಧ್ರುವಾ..!
ಶೂಟಿಂಗ್, ಜಿಮ್ , ವರ್ಕೌಟ್ ಅಂತ ಸದಾ ಬ್ಯುಸಿ ಇರುತ್ತಿದ್ದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸ್ವಲ್ಪ ರಿಲ್ಯಾಕ್ಸ್ ಮೂಡ್ನಲ್ಲಿ ಇದ್ದಾರೆ, ಧ್ರುವಾ ಸರ್ಜಾ ಭಾನುವಾರ ತಮ್ಮ ಪತ್ನಿಯೊಂದಿಗೆ ಜಾಲಿ ಮೂಡ್ನಲ್ಲಿದ್ದಾರೆ, ಕ್ರಿಕೇಟ್ ಆಡಿಕೊಂಡು ನಾಟಿ ಸ್ಟೈಲ್ ನಲ್ಲಿ ಬಿರಿಯಾನಿ ಬೇಯಿಸಿ ತಿಂದಿದ್ದಾರೆ. ಆಕ್ಷನ್ ಪ್ರಿನ್ಸ್ ಹಳ್ಳಿ ಮನೆಯಲ್ಲಿ ಧಮ್ ಕಟ್ಟಿದ ಪಕ್ಕಾ ನಾಟಿ ಸ್ಟೈಲ್ ಧಮ್ ಬಿರಿಯಾನಿ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಧ್ರವ ಸರ್ಜಾ ಹಳ್ಳಿಮನೆಯಲ್ಲಿ ಧಮ್ ಕಟ್ಟಿ ಬಿರಿಯಾನಿ ಮಾಡಿದ ವಿಡಿಯೋ ಇದಾಗಿದೆ. ಸೌದೆ ಒಲೆಯ ಮುಂದೆ ಬೆಂಕಿಗೆ ಗಾಳಿ ಊದುತ್ತಾ ನಾಟಿ ಶೈಲಿಯಲ್ಲಿ ಬಿರಿಯಾನಿ ಮಾಡಿದ ವಿಡಿಯೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಹೀಗಾಗಿ ಧ್ರುವ ಸರ್ಜಾ ಫ್ಯಾನ್ಸ್‌ಗೆ ಈ ವಿಡಿಯೋ ಧಮ್ ಬಿರಿಯಾನಿ ತಿಂದಷ್ಟೇ ಅನುಭವ ಆಗಿದೆ.
ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಚಿತ್ರದಲ್ಲಿ ಧ್ರುವಾ ಸರ್ಜಾ ಅಭಿನಯಿಸುತ್ತಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬರುತ್ತಿರುವುದು ಧ್ರುವಾ ಅಭಿಮಾನಿಗಳಗೆ ಸಂತಸ ತಂದಿದೆ.
****