ಕ್ಯಾರಕ್ಟರ್ಸ್ ಇಂಟರ್ ಡ್ಯೂಸ್ ಮಾಡಿದೆ ಬಡವ ರಾಸ್ಕಲ್ ಟೀಸರ್!
ಡಾಲಿ ಧನಂಜಯ್, ಅಮೃತ ಅಯ್ಯಂಗಾರ್ ಅಭಿನಯಿಸಿರುವ ‘ಬಡವ ರಾಸ್ಕಲ್’ ಚಿತ್ರದ ಟೀಸರ್ ಒಂದು ರಿಲೀಸ್ ಆಗಿದೆ. ಚಿತ್ರದಲ್ಲಿ ಬರುವಂತಹ ಪ್ರಮುಖ ಪಾತ್ರಗಳನ್ನ ಈ ಟೀಸರ್ ಪರಿಚಯಿಸುತ್ತದೆ.
ಟೀಸರ್‌ನ ಆರಂಭದಲ್ಲಿ ಜಗ್ಗಿ ಅಲಿಯಾಸ್ ಪಿಟ್ಟ ಬರ್ತಾನೆ. ನಂತರ ಸಂತು ಅಲಿಯಾಸ್ ಪ್ಯಾಕೆಟ್, ಅನ್ವರ್ ಅಲಿಯಾಸ್ ಕನ್ನಡ ಅನ್ವರ್, ಕೃಷ್ಣ ಅಲಿಯಾಸ್ ಕಬಾಬ್, ಚಂದ್ರ ಅಲಿಯಾಸ್ ಬೆಂಕಿ, ದೀಪು ಅಲಿಯಾಸ್ ಸಣ್ಣಪ್ಪ, ಗಣಪ ಅಲಿಯಾಸ್ ಗಣಪ, ನವೀನ ಅಲಿಯಾಸ್ ಡೌನ್ ಟು ಅರ್ಥ್, ನಾಗಲಿಂಗ ಅಲಿಯಾಸ್ ನಾಗ ಪಾತ್ರಗಳನ್ನ ಕ್ರಮವಾಗಿ ಪರಿಚಯಿಸಲಾಗಿದೆ.
ಇನ್ನು ಕೊನೆಯದಾಗಿ ಶಂಕ್ ಅಲಿಯಾಸ್ ಬಡವ ರಾಸ್ಕಲ್ ಅನ್ನೋ ಬೋರ್ಡ್ ಹಿಡಿದು ನಟ ಧನಂಜಯ್ ಎಂಟ್ರಿ ಕೊಡ್ತಾರೆ. ಈ ಎಲ್ಲಾ ಪಾತ್ರಗಳು ಬಡವ ರಾಸ್ಕಲ್ ಚಿತ್ರದ ಪ್ರಮುಖ ಪಾತ್ರಗಳು. ಸದ್ಯಕ್ಕೆ ಸ್ಲೇಟ್‌ನಲ್ಲಿ ಹೆಸ್ರು ಬರೆದು ಪಾತ್ರ ಪರಿಚಯಿಸಿ ಕೊಂಡಿರೋ ಈ ಪಾತ್ರಗಳು, ಚಿತ್ರದಲ್ಲಿ ಹೇಗಿರಲಿವೆ ಅನ್ನೋ ಕುತೂಹಲ ಸೃಷ್ಟಿ ಮಾಡಿವೆ.
‘ಬಡವ ರಾಸ್ಕಲ್’ ಚಿತ್ರವನ್ನ ಶಂಕರ್ ಗುರು ನಿರ್ದೇಶನ ಮಾಡಿದ್ದು , ಡಾಲಿ ಪಿಚ್ಚರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದೆ. ಚಿತ್ರಕ್ಕೆ ಪ್ರೀತ ಜಯರಾಮ್ ಛಾಯಗ್ರಹಣವಿದೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಧನಂಜಯ್ ಅಮೃತ ಅಯ್ಯಂಗಾರ್ ಅವರೊಂದಿಗೆ ನಾಗಭೂಷಣ್, ರಂಗಾಯಣರಘು, ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರದಲ್ಲಿದ್ದಾರೆ. ಬಡವ ರಾಸ್ಕಲ್ ಚಿತ್ರದ ರಿಲೀಸ್ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಡಿಸೆಂಬರ್ 24ಕ್ಕೆ ಕ್ರಿಸ್ಮಸ್ ಪ್ರಯುಕ್ತ ಚಿತ್ರ ತೆರೆ ಕಾಣಲಿದೆ.
****