ಕ್ಯಾಬ್ ಚಾಲಕನ ಮತ್ತು ಸಂಜನಾ ನಡುವೆ ಜಗಳ: ಟ್ವಿಟರ್ ನಲ್ಲಿ ವಿವರಣೆ ನೀಡಿದ ನಟಿ..!

ನಟಿ ಸಂಜನಾ ಗಲ್ರಾನಿ ಮತ್ತು ಕ್ಯಾಬ್ ಚಾಲಕ ನ ನಡುವೆ ನಡೆದ ಸಣ್ಣ ಜಗಳವನ್ನು ಇಷ್ಟು ದೊಡ್ಡದಾಗಿ ಮಾಡಬಾರದಿತ್ತು ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ ಸಂಜನಾ..! ಒಂದು ಸಣ್ಣ ಗಲಾಟೆಯನ್ನು ಸೂಕ್ಷ್ಮ ವಿಚಾರವಾಗಿ ಪರಿವರ್ತಿಸಬಾರದಿತ್ತು. ನಾನು ಏಸಿ ಹಾಕಲು ಹೇಳಿದಾಗ ಕೋವಿಡ್ ನಿಯಮ ಪಾಲನೆ ಬಗ್ಗೆ ಹೇಳದೆ ಒರಟಾಗಿ ಉತ್ತರಿಸಿದ ಎಂದು ನಟಿ ಸಂಜನಾ ಟ್ವಿಟರ್‍ನಲ್ಲಿ ಹೇಳಿಕೊಂಡಿದ್ದಾರೆ. ಕ್ಯಾಬ್ ಬುಕ್ ಮಾಡುವಾಗ ಏಸಿ ಕಾರನ್ನೇ ಬುಕ್ ಮಾಡಿದೆ. ನಾನು ಒತ್ತಾಯಿಸಿದಾಗ 1 ಪಾಯಿಂಟ್‍ಗೆ ಏಸಿ ಹಾಕಿದರು. ಆತನ ಬಗ್ಗೆ ಒಂದೂ ಶಬ್ದವು ಕೆಟ್ಟದಾಗಿ ಬಳಸಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ತಾಯಿ-ತಂಗಿ ಇದ್ದಿದ್ದರೆ ಏನು ಮಾಡುತ್ತಿದ್ದೆ ಎಂದಷ್ಟೇ ಕೇಳಿದೆ.
ನನ್ನನ್ನು ಶೂಟಿಂಗ್ ಸ್ಥಳದ ಬಳಿ ಡ್ರಾಪ್ ಮಾಡದೆ ಬೇರೆ ದಾರಿಯಲ್ಲಿ ಕರೆದೊಯ್ಯುತ್ತಿದ್ದ. ಅರ್ಧ ರಸ್ತೆಯಲ್ಲೇ ಬಿಟ್ಟರು. ಶೂಟಿಂಗ್ ಸ್ಥಳ ಕೇವಲ ಕೂಗಳತೆಯ ದೂರದಲ್ಲಿದ್ದರೂ ಆ ಸ್ಥಳಕ್ಕೆ ಡ್ರಾಪ್ ಮಾಡಲಿಲ್ಲ. ಆ ಸ್ಥಳಕ್ಕೆ ಬಿಡಲು ಡಬಲ್ ಕೊಡಿ ಎಂದು ಆತ ಕೇಳಿದಾಗ ನಾನು 10 ಸಾವಿರ ಕೊಡುವುದಕ್ಕೆ ಆಗುತ್ತಾ ಎಂದು ಹೇಳಿದೆ. ಎಷ್ಟು ಮೀಟರ್ ಆಗುತ್ತೋ ಅಷ್ಟು ಕೊಡುತ್ತೇನೆ ಎಂದು ಹೇಳಿದಾಗ ಆತ ಅವಾಚ್ಯ ಶಬ್ದಗಳಿಂದ ಮಾತನಾಡಿದ ಎಂದು ತಿಳಿಸಿದ್ದಾರೆ.
ಡ್ರಾಪ್ ಮಾಡುವ ಸಂದರ್ಭದಲ್ಲಿ ಚಾಲಕ ಬೇರೆ ದಾರಿಯಲ್ಲಿ ಹೋಗುತ್ತಿರುವುದು ಗಮನಿಸಿ ನಾನು ಬೆಳಗ್ಗೆ 10.30ರ ಸುಮಾರಿನಲ್ಲಿ ಪೊಲೀಸರಿಗೆ ಕರೆ ಮಾಡಿ ನಾನು ಹೇಳಿದ ಜಾಗಕ್ಕೆ ಕರೆದೊಯ್ಯುತ್ತಿಲ್ಲ ಎಂದು ಹೇಳಿದ ಐದೇ ನಿಮಿಷಕ್ಕೆ ಸರಿಯಾದ ಸ್ಥಳಕ್ಕೆ ಕರೆದೊಯ್ದ. ನಂತರ ಮತ್ತೆ ನಾನು ಪೊಲೀಸರಿಗೆ ಕರೆ ಮಾಡಿ ಚಾಲಕನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ನಾನೇ ಕೋರಿದೆ.
ಆದರೂ ಪೊಲೀಸರು ಆತನ ಕಾರನ್ನು ವಶಕ್ಕೆ ಪಡೆದಿದ್ದಾರೆ. ಚಾಲಕರು ಸಹ ಕಾರ್ಮಿಕರು. ಕಾರ್ಮಿಕ ಸಮುದಾಯದ ಬಗ್ಗೆ ನನಗೆ ಗೌರವವಿದೆ. ನನ್ನ ಜೊತೆ ಆ ಚಾಲಕ ರೂಡಾಗಿ ವರ್ತಿಸಿದ್ದರೂ ಆತನನ್ನು ಕ್ಷಮಿಸುತ್ತೇನೆ. ಮಹಿಳೆಯರು ಕ್ಯಾಬ್‍ನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಚಾಲಕರು ಅವರೊಂದಿಗೆ ವಿನಯದಿಂದ ವರ್ತಿಸಬೇಕು. ಚಾಲಕರು ಉತ್ತಮ ಸೇವೆ ಸಲ್ಲಿಸಲಿ ಎಂದು ಟ್ವಿಟರ್‍ನಲ್ಲಿ ಬರೆದುಕೊಂಡಿದ್ದಾರೆ.