ಕೋಟಿಗೊಬ್ಬ 3 ನಾಳೆ (ಅ 15) ರಿಲೀಸ್..!
ನಾಳೆ (ಅ 15) ಬೆಳಗ್ಗೆ ‘ಕೋಟಿಗೊಬ್ಬ- 3’ ಚಿತ್ರ ರಿಲೀಸ್ ಆಗಲಿದೆ. ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾದ್ಯಂತ ಕಿಚ್ಚನ ಆರ್ಭಟ ಶುರು. ಕೋಟಿಗೊಬ್ಬ- 3 ಚಿತ್ರಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇಂದು ಸಂಜೆಯೊಳಗೆ ತಾಂತ್ರಿಕ ಸಮಸ್ಯೆ ಪರಿಹಾರವಾಗಲಿದೆ. ನಾಳೆ ಬೆಳಗ್ಗೆಯೇ ಕೋಟಿಗೊಬ್ಬ- 3 ಚಿತ್ರ ಬಿಡುಗಡೆಯಾಗಲಿದೆ ಎಂದು ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ಮಾಹಿತಿ ನೀಡಿದ್ದಾರೆ.
ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಸಿನಿಮಾವನ್ನು ಸೂರಪ್ಪ ಬಾಬು ಅವರು ನಿರ್ಮಿಸಿದ್ದು, ಅದ್ಧೂರಿ ಸೆಟ್ಗಳು ಕಣ್ಮನ ಸೆಳೆಯುವ ಲೊಕೇಷನ್, ಸಖತ್ ಆಯಕ್ಷನ್ ಸೀಕ್ವೆನ್ಸ್ಗಳು ನೋಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿವೆ ಎನ್ನಬಹುದು. ಜೊತೆಗೆ ಬಾಲಿವುಡ್ ನಟರು ಸಿನಿಮಾಗೆ ಮತ್ತಷ್ಟು ಮೆರುಗು ನೀಡಿದ್ದಾರೆ. ಅಫ್ತಾಬ್ ಶಿವದಾಸಾನಿ ಕೋಟಿಗೊಬ್ಬ 3 ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಖಾತೆ ತೆರೆದಿದ್ದಾರೆ. ಶ್ರದ್ಧಾ ದಾಸ್, ತಬಲಾ ನಾಣಿ, ರವಿಶಂಕರ್, ರಾಜೇಶ್ ನಟರಂಗ ತಾರಾಗಣದಲ್ಲಿದ್ದಾರೆ.
****