ಕಿಚ್ಚನಿಗೆ ಬೆದರಿಕೆ ಪತ್ರ…ಪತ್ರದಲ್ಲೇನಿದೆ ? ಪತ್ರ ಬಂದಿದ್ದು ಯಾವಾಗ ?

ನಟ ಕಿಚ್ಚ ಸುದೀಪ್ ರಾಜಕೀಯ ಕಣಕ್ಕೆ ಇಳಿಯುತ್ತಾರೆ ಅನ್ನೋ ಸುದ್ದಿ ಜೋರಾಗುತ್ತಿದ್ದ ಬೆನ್ನಲ್ಲೆ ಕಿಚ್ಚನಿಗೆ ಬೆದರಿಕೆ ಪತ್ರ ಬಂದಿದೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿದೆ…ಸಿನಿಮಾ ಸ್ಟಾರ್ ಗಳು ಅಂದಮೇಲೆ ಬೆದರಿಕೆ ಪತ್ರಗಳು ಬೆದರಿಕೆ ಕರೆಗಳು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ…
ಸದ್ಯ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಗೆ ಬೆದರಿಕೆ ಪತ್ರ ಬಂದಿರೋ ಕಾರಣ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ ಕಿಚ್ಚನ ಮ್ಯಾನೇಜರ್ ಜಾಕ್ ಮಂಜು…
ಬೆದರಿಕೆ ಪತ್ರದ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ ಜಾಕ್ ಮಂಜು … ದೂರಿನನ್ವಯ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ ಪೊಲೀಸರು..ಹಾಗಾದ್ರೆ ಪತ್ರದಲ್ಲೇನಿದೆ…

ಲೋ ಶ…. ಸುದೀಪ ಏನೋ ನಿಮ್ಮ ಜನ್ಮ ಲೇ, ಏನೊ ನಿನ್ನ ಬಾಳು, ಇನ್ನು ಎಷ್ಟು ಜನ ಹೆಣ ಮಕ್ಕಳನ್ನು ಹಾಳು ಮಾಡುತ್ತಿಯಾ… ಈ ಸಲ ಒಂದು ಕೊನೆ ಮಾಡುತ್ತಿವಿ… ನಿನ್ನ ರಾಸಲೀಲೆ ವಿಡಿಯೋ, ನಿನ್ನ ಪಂಜಾಬಿ ಹುಡುಗಿ, ನಿನ್ನ ಚೆನೈ.. ನಿನ್ನ ದುಬೈ, ನಿನ್ನ ರಾಜಾರಾಜೇಶ್ವರಿ ನಗರದ ವಿಡಿಯೋ, ನಿನ್ನ ಜೆ.ಪಿ. ನಗರದ ವಿಡಿಯೋ, ನಿನ್ನ ಶೆರ್ಟಾನ್ ಕಥೆ, ನಿನ್ನ ಸ್ನೇಹಿತರಿಗೆ, ಮತ್ತೆ ನಿನ್ನ ಮಹಾಸಾಚ ಅಂದುಕೊಂಡಿರೋರಿಗೆ ಈ ವಿಡಿಯೊ ಬೇಗ ಸೇರುತ್ತೋ… ನೀನು ಕ್ರಿಕೇಟ್ ಆಡು.. ನಾವು ಎದರಿಸುತ್ತಿಲ್ಲ… ಬಾಕ್ ಮೇಲ್ ಅಲ್ಲ, ಮೇಕಪ್ ಇಲ್ಲದೆ ಇರೋ ನಿನ್ನ ನಿಜವಾದ ಮುಖ ಜನರಿಗೆ ಗೊತ್ತಾಗಬೇಕು, ಪ್ರೋಡ್ಸರ್ಗೆ ಹೊಟ್ಟೆ ಉರಿಸಿದರೆ ಸುಮ್ಮನೆ ಇರತಾರ …ನಿಮ್ಮ ರಾಸಲೀಲೆಗಳನ್ನು ವಿಡಿಯೋ ಮಾಡಿಕೊಂಡು ನಿಂಗೆ ಎಲ್ಲಿ ಒದಯಬೇಕು, ಅಲ್ಲಿ ಒದೆಯುತ್ತಾರೆ… ಕಾಯ್ತಿರು ಈ ವಿಡಿಯೋವನ್ನ ನಿನ್ನ ಹೆಂಡತಿ ಮತ್ತು ಮಿಡಿಯಾಗೆ ಕೊಡುವುದಾಗಿ ಪ್ರಸ್ತಾಪಿಸಿದ್ದು, ಸರೋಜಮ್ಮ, ಸಂಜೀವ್ ಮತ್ತು ಅವರ ಕುಟುಂಬದ ವಿರುದ್ಧ ಸಂಚು ರೂಪಿಸಿ ಅನಾಮದೇಯ ಪತ್ರಗಳ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿದ್ದಾರೆ…

ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂ.155/2023 ರಲಿ ನಮೂದಿಸಿದ್ದು, ಎನ್ ಸಿಆರ್ ನಲ್ಲಿ ಪ್ರಸ್ತಾಪಿಸಿರುವ ಅಂಶಗಳು ಅಪರಾಧದಿಂದ ಕೂಡಿರುವುದರಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು, ಆದೇಶಕಾಗಿ ಮಾನ್ಯ ನ್ಯಾಯಾಲಯಕ್ಕೆ, ವರದಿಯನ್ನು ಸಲ್ಲಿಸಿದ ಮೇರೆಗೆ ಎನ್.ಸಿ.ಆರ್ ನಲ್ಲಿ, ಪ್ರಸ್ತಾಪಿಸಿರುವ ಅಂಶಗಳಿಗೆ ಸಂಬಂಧಪಟ್ಟಂತೆ, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಆದೇಶ ನೀಡಿದ ಮೇರೆಗೆ ತನಿಖೆ ಶುರುವಾಗಿದೆ..
ದೂರಿನನ್ವಯ ಐಪಿಸಿ 504, 506 ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ..
ಸದ್ಯ ಎಲ್ಲರೂ ಅಂದುಕೊಂಡಂತೆ ಈ ಪತ್ರ ನಿನ್ನೆ ಮೊನ್ನೆಯದಲ್ಲ…ಮಾರ್ಚ್ 10 ರಂದೇ ಈ ಪತ್ರ ಕಿಚ್ಚನ ಮನೆ ತಲುಪಿದೆ ..ಇಷ್ಟು ದಿನಗಳ ಕಾಲ ತನಿಖೆ ನಡೆಸಿದ ಪೊಲೀಸರು ಈಗ ಎಫ್ ಐ ಆರ್ ದಾಖಲು ಮಾಡಿದ್ದಾರೆ…