News

‘ಓಲ್ಡ್ ಮಾಂಕ್’ ವಿತರಣೆ ಹಕ್ಕು,ಹಿಂದಿ ಡಿಸ್ಟ್ರಿಬ್ಯೂಟರ್ಸ್ ಗೆ ಸೇಲ್!

‘ಓಲ್ಡ್ ಮಾಂಕ್’ ವಿತರಣೆ ಹಕ್ಕು,ಹಿಂದಿ ಡಿಸ್ಟ್ರಿಬ್ಯೂಟರ್ಸ್ ಗೆ ಸೇಲ್!
  • PublishedDecember 9, 2021

ನಿರ್ದೇಶಕ ಶ್ರೀನಿ ತಮ್ಮ ಮುಂದಿನ ಸಿನಿಮಾ ಓಲ್ಡ್ ಮಾಂಕ್ ಸಿದ್ದಗೊಳಿಸಿದ್ದಾರೆ. ಓಲ್ಡ್ ಮಾಂಕ್‌ ನ ಔಟ್‌ ರೇಟ್ ಹಕ್ಕುಗಳನ್ನು ಪ್ರಮುಖ ಹಿಂದಿ ವಿತರಕರಾದ ಅಭಿಜಿತ್ ಎಂಟರ್‌ಪ್ರೈಸಸ್‌ಗೆ ಮಾರಾಟ ಮಾಡಲಾಗಿದೆ.ಆಶಿಖಿ, ಗುಲಾಮ್, ಗುಲ್ಲಿ ಬಾಯ್ ಹಾಗೂ ತಾನಾಜಿ ಸಿನಿಮಾಗಳನ್ನು ವಿತರಣೆ ಮಾಡಿದ್ದ ಅಬಿಜಿತ್ ಎಂಟರ್ ಪ್ರೈಸಸ್ ಓಲ್ಡ್ ಮಾಂಕ್ ವಿತರಣೆ ಹಕ್ಕು ಪಡೆದುಕೊಂಡಿದೆ.

ರೋಮ್ಯಾಂಟಿಕ್ ಕಥಾ ಹಂದರವುಳ್ಳ ಓಲ್ಡ್ ಮಾಂಕ್ ಸಿನಿಮಾವನ್ನು 2022 ರಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಸಿನಿಮಾದಲ್ಲಿ ಅದಿತಿ ಪ್ರಭುದೇವ, ಮಲಯಾಳಂ ನಟ ಸುದೇವ್ ನಾಯರ್ ಖಳನಾಯಕನ ಪಾತ್ರಲ್ಲಿ ನಟಿಸಿದ್ದಾರೆ. 

ಎಸ್ .ನಾರಾಯಣ, ಸಿಹಿಕಹಿ ಚಂದ್ರು, ಕೆಟಿ ರಮಾ, ಡಿಂಗ್ರಿ ನಾಗರಾಜ್ ಹಾಗೂ ಬೆಂಗಳೂರು ನಾಗೇಶ್ ಸೇರಿದಂತೆ ಹಲವು ಹಿರಿಯ ಕಲಾವಿದರು ನಟಿಸಿದ್ದಾರೆ.  ಓಲ್ಡ್ ಮಾಂಕ್ ಚಿತ್ರಕ್ಕೆ ಸೌರಭ್ ವೈಭವ್ ಸಂಗೀತ ನೀಡಿದರೆ, ಭರತ್ ಪರಶುರಾಮ್ ಛಾಯಾಗ್ರಹಣ ಮಾಡಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *