News

ಐಪಿಎಸ್ ಅಧಿಕಾರಿಯಿಂದ ಲಾಂಚ್ ಆಗುತ್ತಿದೆ ಡಾರ್ಲಿಂಗ್ ಕೃಷ್ಣ ಅಭಿನಯದ ಸಿನಿಮಾ ಟೈಟಲ್..!

ಐಪಿಎಸ್ ಅಧಿಕಾರಿಯಿಂದ ಲಾಂಚ್ ಆಗುತ್ತಿದೆ ಡಾರ್ಲಿಂಗ್ ಕೃಷ್ಣ ಅಭಿನಯದ ಸಿನಿಮಾ ಟೈಟಲ್..!
  • PublishedSeptember 25, 2021

ಡಾರ್ಲಿಂಗ್ ಕೃಷ್ಣ ಹಾಗೂ ನಿಶ್ವಿಕಾ ನಾಯ್ಡು ಒಟ್ಟಾಗಿ ನಟಿಸುತ್ತಿರುವ ಸಿನಿಮಾಕ್ಕೆ ಶಿವತೇಜಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಈ ಸಿನಿಮಾದಲ್ಲಿ ನಿಶ್ವಿಕಾ ನಟಿಸುತ್ತಿರೋದು ಬಹಿರಂಗ ಆಗಿತ್ತು. ಈಗ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಕೂಡ ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರಂತೆ. ಮೇಘಾ ಶೆಟ್ಟಿ ಪಾತ್ರ ಹೇಗೆ ಇರಲಿದೆ ಎಂಬುದರ ಬಗ್ಗೆ ಮೇಘಾ ಆಗಲೀ, ಸಿನಿಮಾ ತಂಡವಾಗಲೀ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಶಿವತೇಜಸ್‌ ಈಗ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು ಇನ್ನೂ ಚಿತ್ರಕ್ಕೆ ಟೈಟಲ್ ನಿರ್ಧರಿಸಿಲ್ಲ, ಸೆಪ್ಟಂಬರ್ 27 ರಂದು ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

ಸೆಪ್ಟೆಂಬರ್​ 27ರಂದು  (ಐಪಿಎಸ್) ದಕ್ಷ ಪೊಲೀಸ್​​ ಅಧಿಕಾರಿ ರವಿ ಡಿ. ಚೆನ್ನಣ್ಣನವರ್​ ಟೈಟಲ್​ ಲಾಂಚ್ ಮಾಡಲಿದ್ದಾರೆ. ಪೊಲೀಸ್​ ಅಧಿಕಾರಿ ಕೈಯಲ್ಲಿ ಟೈಟಲ್​ ಲಾಂಚ್​ ಮಾಡಿಸುತ್ತಿರುವುದರಿಂದ ಸಿನಿಮಾ ಕಥೆ ಪೊಲೀಸ್​ ಕಥಾಹಂದರ ಹೊಂದಿರಲಿದೆಯೆ ಎನ್ನುವ ಕುತೂಹಲ ಮೂಡಿದೆ. ಇದಕ್ಕೆ ಚಿತ್ರತಂಡ ಉತ್ತರ ನೀಡಬೇಕಿದೆ. ಸುಮಂತ್​ ಕ್ರಾಂತಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶಿವ ತೇಜಸ್​ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರವಿ ವರ್ಮಾ ಅವರ ಆಯಕ್ಷನ್​ ನಿರ್ದೇಶನ​ ಸಿನಿಮಾಗೆ ಇರಲಿದೆ.ಅರ್ಜುನ್ ಜನ್ಯ ಸಂಗೀತ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣದೊಂದಿಗೆ, ರಶ್ಮಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ.

****

Written By
Kannadapichhar

Leave a Reply

Your email address will not be published. Required fields are marked *