ಉಪ್ಪಿಗೆ ಬರ್ತಡೆ ಗಿಫ್ಟ್ ‘ಕಬ್ಜಾ’ ಚಿತ್ರದ ಮೋಷನ್ ಪೋಸ್ಟರ್ ನಾಳೆ ರಿಲೀಸ್..!

ರಿಯಲ್ ಸ್ಟಾರ್ ಉಪೇಂದ್ರ ಅವರು ನಾಳೆ ಸೆಪ್ಟೆಂಬರ್ 18 ರಂದು ತಮ್ಮ 51 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹುಟ್ಟುಹಬ್ಬ ದಿನದಂದು ಬೆಂಗಳೂರಿನಲ್ಲಿ ಇರುವುದಿಲ್ಲಾ ಮತ್ತು ನೀವಿರುವಲ್ಲಿಂದಲೇ ಶುಭಾಶಯ ತಿಳಿಸಿ ಹಾರೈಸಿ ಎಂದು ಉಪ್ಪಿ ತಮ್ಮ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡಿಕೊಂಡಿದ್ದರು. ಇದರಿಂದಾಗಿ ಉಪ್ಪಿ ಅಭಿಮಾನಿಗಳು ಬೇಸರ ಮಾಡಿಕೊಂಡಿದರು.
ಆದರೆ ಈಗ ಬೆಸರಕೊಂದು ಬ್ರೇಕ್ ಹಾಕುವ ಸುದ್ದಿಯೊಂದು ಬಂದಿದ್ದು ಸೆಪ್ಟೆಂಬರ್ 18 ರಂದು ಉಪ್ಪಿ ಅಭಿನಯದ ಕಬ್ಜಾ ಚಿತ್ರದ ಮೋಷನ್ ಪೋಸ್ಟರ್ ಅನ್ನು ರಿಲೀಸ್ ಮಾಡಲು ಕಬ್ಜಾ ಚಿತ್ರತಂಡ ನಿರ್ಧರಿಸಿದೆ. ಈ ವಿಷಯವನ್ನು ಕಬ್ಜಾ ಚಿತ್ರ ನಿರ್ದೇಶಕ ಚಂದ್ರು ಅವರು ತಿಳಿಸಿದ್ದಾರೆ. ಕಬ್ಜಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ತಯಾರಾಗುತ್ತಿರುವ ಬಹು ನಿರೀಕ್ಷೆಯ ಸಿನಿಮಾ. ನಾಳೆ ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಕಾರಣ ಮೋಷನ್ ಪೋಸ್ಟರ್ ರಿಲೀಸ್ ಆಗುತ್ತಿದೆ.
****