ಇವನು ರಾಮು ಅಲ್ಲ ಕಣೋ ರೇಮೊ ರೇಮೊ: “ ರೆಮೊ “ ಗೆ ಶುಭಾಶಯ ಹೇಳಿದ ಚಿತ್ರ ತಂಡ

ಇಂದು ರೆಮೊ ಚಿತ್ರ ಹೀರೋ ಇಶಾನ್ ಅವರ ಹುಟ್ಟು ಹಬ್ಬ. ಇಶಾನ್ ಹುಟ್ಟು ಹಬ್ಬಕ್ಕೆ ರೆಮೊ ಚಿತ್ರ ತಂಡ ಇಶಾನ್ ಅವರಿಗೆ ವಿಶಸ್ ಪೋಸ್ಟರ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಶುಭಾಷಯಗಳನ್ನು ತಿಳಿಸಿದೆ.
ಪವನ್ ಒಡೆಯರ್ ನಿರ್ದೇಶನದ, ಸಿ.ಆರ್ ಮನೋಹರ್ ನಿರ್ಮಾಣ ಮಾಡಿರುವ ಇಶಾನ್ ಅಭಿನಯದ “ ರೆಮೊ “ ಚಿತ್ರ ತೆರೆಗೆ ಬರಲು ರೆಡಿಯಾಗಿದೆ. ಚಿತ್ರ ನಾಯಕನಾಗಿ ಇಶಾನ್ ಕಾಣಿಸಿಕೊಂಡಿದ್ದರೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ, ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತವಿದ್ದು,ಕವಿರಾಜ್ ಪ್ರದ್ಯೂಮ್ನ, ಪವನ್ ಒಡೆಯರ್ ಅವರ ಸಾಹಿತ್ಯವಿದೆ. ಸ್ಟಂಟ್ ಡಿಫರೆಂಟ್ ಡ್ಯಾನಿ, ನೃತ್ಯ ಸಂಯೋಜನೆಯನ್ನು ಇಮ್ರಾನ್ ಮಾಡಿದ್ದಾರೆ.

ಇಶಾನ್ ಅವರ ಹುಟ್ಟು ಹಬ್ಬಕ್ಕೆ ಕನ್ನಡ ಪಿಚ್ಚರ್ ವತಿಯಿಂದ ಶುಭಾಶಯಗಳು.
****