‘ಇನ್’ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ನಟಿ ಪಾವನಾ ಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಇನ್ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಿನ್ನೆಯಷ್ಟೆ ಪುನೀತ್ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಇಂದು ‘ಇನ್’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಹೊಸ ಬಗೆಯ ಸಿನಿಮಾ ಮಾಡುವ ಟ್ರೆಂಡ್ ಸ್ಯಾಂಡಲ್ ವುಡ್ ನಲ್ಲೂ ನಡೆಯುತ್ತಿರುತ್ತದೆ. ಈಗ ಅಂತಹದೆ ವಿಭಿನ್ನ ಕಥೆಯನ್ನು ‘ಇನ್’ ಚಿತ್ರದ ಮೂಲಕ ಹೇಳಲು ಹೊರಟಿದೆ ಹೊಸಬರ ಉತ್ಸಾಯಿ ತಂಡ. ಲಾಕ್ ಡೌನ್ ಸಮಯದ ಮಾನಸಿಕ, ಸಾಮಾಜಿಕ ಪರಿಸ್ಥಿತಿಯ ವಿಭಿನ್ನ ಕಥೆಯೊಂದರ ಎಳೆಯನ್ನಿಟ್ಟುಕೊಂಡು ಹೊಸ ಬಗೆಯ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
‘ರುದ್ರಿ’ ಚಿತ್ರದ ಮೂಲಕ ಭರವಸೆ ಮೂಡಿಸಿರುವ ಯುವ ನಿರ್ದೇಶಕ ಬಡಿಗೇರ್ ದೇವೇಂದ್ರ. ಒಬ್ಬಳೇ ಯುವತಿ ಒಂಟಿ ಮನೆ ಸುತ್ತ ಲಾಕ್ ಡೌನ್ ಪರಿಣಾಮದ ಕುರಿತ ವಿಭಿನ್ನ ಕಥಾ ಹಂದರವುಳ್ಳ ಚಿತ್ರ ನಿರ್ದೇಶನ ಮಾಡಿದ್ದಾರೆ. ಪತ್ರಕರ್ತ ಶಂಕರ ಪಾಗೋಜಿ ಕಥೆ,ಚಿತ್ರಕತೆ, ಸಂಭಾಷಣೆ ಜವಾಬ್ದಾರಿ ನೋಡಿಕೊಂಡಿದ್ದಾರೆ. ಚಿತ್ರಕ್ಕೆ ಭರತ್ ನಾಯ್ಕ್ ಅವರ ಸಂಗೀತವಿದೆ.
****