News

ಆಶಿಕಾ ಬೋಲ್ಡ್ ಅವತಾರ.. ನೋಡಿ ಕಾಣೆಯಾದವರ್ಯಾರು?

  • PublishedJanuary 31, 2021

ವಿಭಿನ್ನ ಕಥಾಹಂದರ ಹೊಂದಿರುವ “ಕಾಣೆಯಾದವರ ಬಗ್ಗೆ ಪ್ರಕಟಣೆ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು ಹಾಗೂ ಬ್ಯಾಂಕಾಕ್ ನಲ್ಲಿ ಸುಮಾರು 60ದಿನಗಳ ಚಿತ್ರೀಕರಣ ನಡೆದಿದೆ.ಚಿತ್ರದ ವಿಶೇಷ ಪಾತ್ರದಲ್ಲಿ ಬೆಡಗಿ‌ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ.ಯಾರ ಸ್ವಭಾವವನ್ನು ಅವರ ವೇಷಭೂಷಣದಿಂದ ನಿರ್ಧರಿಸಲು ಸಾಧ್ಯವಿಲ್ಲ. ಅವರ‌‌ ವೇಷಭೂಷಣವೇ ಬೇರೆ. ಸ್ವಭಾವವೇ ಬೇರೆ ಎಂಬುದನ್ನು ನಿರ್ದೇಶಕರು ಆಶಿಕಾ ರಂಗನಾಥ್ ಅವರ ಪಾತ್ರದ ಮೂಲಕ ಈ ಚಿತ್ರದಲ್ಲಿ ತೋರಿಸುತ್ತಿದ್ದಾರೆ.


ರಂಗಾಯಣ ರಘು, ರವಿಶಂಕರ್, ತಬಲ‌ನಾಣಿ, ಚಿಕ್ಕಣ್ಣ, ತಿಲಕ್ ಮುಂತಾದ ಅನುಭವಿ ಕಲಾವಿದರ ತಾರಾಬಳಗ ಈ ಚಿತ್ರದಲ್ಲಿದೆ.
ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದಿರುವ ದಿಲ್ ವಾಲ, ಶಕ್ತಿ, ರಾಂಬೋ ೨ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಅನಿಲ್ ಕುಮಾರ್ ನಿರ್ದೇಶನದ ಏಳನೇ ಚಿತ್ರವಿದು.


ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಭಾಷಣೆ ಬರೆದಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಶಿವಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಏ ಜೆ ಟಾಕೀಸ್ ಹಾಗೂ ಬಿಲ್ವ ಎಂಟರ್ ಟೈನ್‌‌ಮೆಂಟ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.


ಕೌಟುಂಬಿಕ ಕಥಾಹಂದರದೊಂದಿಗೆ, ಮನೋರಂಜನೆಯ‌ ಮಹಾಪೂರವನ್ನೇ ಹರಿಸಲು “ಕಾಣೆಯಾದವರ ಬಗ್ಗೆ ಪ್ರಕಟಣೆ” ಮುಂಬರುವ ಮೇ ತಿಂಗಳಲ್ಲಿ ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರಕಟವಾಗಲಿದೆ.

Written By
Kannadapichhar

Leave a Reply

Your email address will not be published. Required fields are marked *