ಆನಂದ್ ಮಿಶ್ರಾ ನಿರ್ದೇಶನದ ಸಿನಿಮಾದಲ್ಲಿ ತರುಣ್ ಮತ್ತು ದಿಗಂತ್!
ಚಿತ್ರರಂಗದಲ್ಲಿ ಕೆಲವರು ಇದ್ದಕಿದ್ದ ಹಾಗೆ ಮಾಯವಾಗಿ ಬಿಡುತ್ತಾರೆ ಆ ಸಾಲಿಗೆ ‘ಲವ್ ಗುರು’ ಖ್ಯಾತಿಯ ತರುಣ್ ಚಂದ್ರ ಸೇರುತ್ತಾರೆ. ಈಗ ಮತ್ತೆ ತರುಣ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ವಿಶೇಷವಾದ ಪಾತ್ರದ ಮೂಲಕ ನಟ ತರುಣ್ ಚಂದ್ರ ಕನ್ನಡ ಸಿನಿಮಾರಂಗದಲ್ಲಿ ಮತ್ತೇ ತಮ್ಮ ಸಿನಿಮಾ ಜರ್ನಿ ಆರಂಭಿಸಲು ಬರುತ್ತಿದ್ದಾರೆ.
ಲವ್ ಗುರು ನಾಯಕ ತರುಣ್ ಚಂದ್ರ ಮತ್ತು ಗಾಳಿಪಟ ನಟ ದಿಗಂತ್ ಆನಂದ್ ಮಿಶ್ರಾ ಚೊಚ್ಚಲ ನಿರ್ದೇಶನದ ‘ಟ್ರಿನ್ ಟ್ರಿನ್’ ಎಂಬ ಥ್ರಿಲ್ಲರ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
ಸದ್ಯಕ್ಕೆ ಸಿನಿಮಾಗೆ ಟ್ರಿನ್ ಟ್ರಿನ್ ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದೆ. ಕೊರಿಯನ್ ಮತ್ತು ಹಾಲಿವುಡ್ ಚಲನಚಿತ್ರಗಳಿಂದ ಪ್ರಬಾವಿತರಾಗಿ ಸಿನಿಮಾ ಕಥೆ ಬರೆದಿರುವುದಾಗಿ ನಿರ್ದೇಶಕ ಆನಂದ್ ಮಿಶ್ರಾ ತಿಳಿಸಿದ್ದಾರೆ.
ಮುಂಬಯಿ ಮೂಲದ ಆನಂದ್ ಹಲವು ರಿಯಾಲಿಟಿ ಶೋ ಗಳನ್ನುನಿರ್ಮಿಸಿದ್ದಾರೆ. ವಿವಿಧ ಚಾನೆಲ್ ಗಳಿಗೆ ಕಾರ್ಯಕ್ರಮ ನಿರ್ಮಿಸಿ ಕೊಟ್ಟಿದ್ದಾರೆ. ಬಾಲಿವುಡ್ ಗೆ ಕೆಲವು ಮ್ಯೂಸಿಕ್ ವಿಡಿಯೋಗಳು, ವಾಣಿಜ್ಯ ಜಾಹೀರಾತು, ಮತ್ತು ಸಣ್ಣಕತೆಗಳನ್ನು ನಿರ್ದೇಶಿಸಿದ್ದಾರೆ.
ನಿರ್ಮಾಪಕ ಕಮರ್ ಅವರು ತಮ್ಮ ಹೋಮ್ ಬ್ಯಾನರ್ ಕಮರ್ ಫ್ಯಾಕ್ಟರಿ ಅಡಿಯಲ್ಲಿ ಪ್ರಾಜೆಕ್ಟ್ ನಿರ್ಮಿಸುತ್ತಿದ್ದಾರೆ. “ಇದು ಕಮರ್ ಅವರೊಂದಿಗಿನ ನನ್ನ ಮೊದಲ ಚಿತ್ರವಾಗಿದೆ, ಆದರೆ, ನಾನು ಈ ಹಿಂದೆ ಒಂದೆರಡು ಶೋಗಳಿಂದಾಗಿ ನಿರ್ಮಾಪಕರೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಆನಂದ್ ತಿಳಿಸಿದ್ದಾರೆ.

ಬಾಕ್ಸ್ ಕ್ರಿಕೆಟ್ ಲೀಗ್ ಮತ್ತು ಇಂಡಿಯನ್ ಬೌಲಿಂಗ್ ಲೀಗ್, ಇದರಲ್ಲಿ ಕನ್ನಡದ ವಿವಿಧ ಕಲಾವಿದರು ಮತ್ತು ಸ್ಟಾರ್ ಗಳು ಭಾಗವಹಿಸಿದ್ದರು. ಸ್ಯಾಂಡಲ್‌ವುಡ್ ನನಗೆ ಹೊಸದಲ್ಲ ಎಂದು ತಿಳಿಸಿದ್ದಾರೆ.
ಜನವರಿ ಮದ್ಯದಲ್ಲಿ ಸಿನಿಮಾ ಆರಂಭಿಸಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ. ಸದ್ಯ ಸಿನಿಮಾಗಾಗಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಎಚ್ .ಸಿ ವೇಣು ಛಾಯಾಗ್ರಹಣವಿದ್ದು, ಆನಂದ್ ರಾಜಾ ವಿಕ್ರಮ್ ಸಂಗೀತ ನೀಡಲಿದ್ದಾರೆ.
ಮಾರಿಗೋಲ್ಡ್, ಗಾಳಿಪಟ 2, ಹುಟ್ಟುಹಬ್ಬದ ಶುಭಾಷಯಗಳು, ಮತ್ತು ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರಗಳ ಚಿತ್ರೀಕರಣ ಮುಗಿಸಿರುವ ದಿಗಂತ್ ಈಗ ಬಿಡುಗಡೆಗೆ ಕಾಯುತ್ತಿದ್ದಾರೆ.
ತೆಲುಗು ಚಿತ್ರದ ಕನ್ನಡ ರಿಮೇಕ್ ಎವಾರುಗಾಗಿ ದಿಗಂತ್ ಸದ್ಯ ಬ್ಯುಸಿಯಾಗಿದ್ದಾರೆ. ಗೋವಾ ಚಿತ್ರದಲ್ಲಿ (2015) ಕೊನೆಯದಾಗಿ ಕಾಣಿಸಿಕೊಂಡಿದ್ದ ತರುಣ್ ಚಂದ್ರ, ಕೆಲವು ವರ್ಷಗಳಿಂದ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಆನಂದ್ ಮಿಶ್ರಾ ಅವರ ಟ್ರಿನ್ ಟ್ರಿನ್ ಮೂಲಕ ಪುನರಾಗಮಿಸುತ್ತಿದ್ದಾರೆ.
****