ಅಭಿಷೇಕ್ ಅಂಬರೀಶ್ ಮದುವೆ ಫಿಕ್ಸ್..ಹುಡುಗಿ ಯಾರು? ಮದುವೆ ಯಾವಾಗ?

ಸ್ಯಾಂಡಲ್ ವುಡ್ ನ ಭರವಸೆಯ ನಟ ಅಭಿಷೇಕ್ ಅಂಬರೀಶ್. ಸದ್ಯ ಅಭಿಷೇಕ್ ಅಂಬರೀಶ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿ ಆಗಿದ್ದಾರೆ ದುನಿಯಾ ಸೂರಿ ಜೊತೆ ಬ್ಯಾಡ್ ಮ್ಯಾನರ್ಸ್ ಸಿನಿಮಾ ಮುಗಿಸಿರುವ ಅಭಿಷೇಕ್, ನಂತರದಲ್ಲಿ ನಿರ್ದೇಶಕ ಮಹೇಶ್ ಹಾಗೂ ಹೆಬ್ಬುಲಿ ಕೃಷ್ಣ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ನಟಿಸಲು ಸಿದ್ಧವಾಗುತ್ತಿದ್ದಾರೆ. ಈ ಮಧ್ಯೆ ಗಾಂಧಿನಗರದಲ್ಲಿ ಅಭಿಷೇಕ್ ಅಂಬರೀಶ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ
ಹಾಗಾದರೆ ಅಭಿಷೇಕ್ ಅಂಬರೀಶ್ ನಿಜಕ್ಕೂ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾದ್ರಾ ಎನ್ನುವ ಅನುಮಾನಗಳು ಹಲವರಲ್ಲಿ ಮೂಡಿದೆ. ಹೌದು ಸಧ್ಯ ಹರಡಿರುವ ಸುದ್ದಿಯಂತೆ ಅಭಿಷೇಕ್ ಅಂಬರೀಶ್ ದಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ ಅದಕ್ಕೆ ಮುನ್ನಡೆಯಂತೆ ಡಿಸೆಂಬರ್ 11ರಂದು ಅಭಿಷೇಕ್ ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆಗಳು ಆಗಿದೆ
ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ನಿಶ್ಚಿತಾರ್ಥಕೆ ಬೇಕಾಗಿರುವ ಎಲ್ಲ ತಯಾರಿಗಳನ್ನ ಖಾಸಗಿ ಇವೆಂಟ್ ಕಂಪನಿಗೆ ನೀಡಲಾಗಿದೆಯಂತೆ..
ಅಭಿ ಮದುವೆ ಕಂಪ್ಲೀಟ್ ಅರೇಂಜ್ ಮ್ಯಾರೇಜ್ ಆಗಿದ್ದು ಅಮ್ಮ ನೋಡಿರುವ ಹುಡುಗಿಯನ್ನೇ ಮದುವೆಯಾಗಲು ಯಂಗ್ ರೆಬೆಲ್ ಸ್ಟಾರ್ ನಿರ್ಧಾರ ಮಾಡಿದ್ದಾರೆ ನಿಶ್ಚಿತಾರ್ಥದವರೆಗೂ ಹುಡುಗಿಯ ಬಗ್ಗೆ ಆಗಲಿ ಅಥವಾ ಮದುವೆ ಬಗ್ಗೆ ಆಗಲಿ ಯಾರಿಗೂ ವಿಚಾರ ತಿಳಿಯಬಾರದು ಎನ್ನುವ ಕಾರಣದಿಂದಾಗಿ ಇಂದಿಗೂ ಕೂಡ ಹುಡುಗಿ ಹಾಗೂ ನಿಶ್ಚಿತಾರ್ಥದ ದಿನಾಂಕವನ್ನು ಗುಟ್ಟಾಗಿ ಇಟ್ಟಿದ್ದಾರೆ ಸುಮಲತಾ ಅಂಬರೀಶ್
ಈಗಾಗಲೇ ಅಮರ್ ಸಿನೆಮಾ ಮೂಲಕ ಭರವಸೆ ಮೂಡಿಸಿರುವಂತಹ ಅಭಿಷೇಕ್ ಅಂಬರೀಷ್ ಮುಂದಿನ ದಿನಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕೊಡುವ ಮೂಲಕ ಸ್ಯಾಂಡಲ್ ವುಡ್ ನ ಭರವಸೆಯ ನಟ ಆಗಲಿದ್ದಾರೆ.ಒಟ್ಟಾರೆ ಸದ್ಯ ಹರಡಿರುವ ಸುದ್ದಿಯಂತೆ ಅಭಿಷೇಕ್ ಅಂಬರೀಶ್ ಕೆಲವೇ ದಿನಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ.