News

ಅಪ್ಪು ಹುಟ್ಟು ಹಬ್ಬಕ್ಕೆ ಇನ್ನೂ 100 ದಿನ ಇರುವಾಗಲೆ, ಅಭಿಮಾನಿಗಳ ಅಭಿಯಾನ ಶುರು..!

ಅಪ್ಪು ಹುಟ್ಟು ಹಬ್ಬಕ್ಕೆ ಇನ್ನೂ 100 ದಿನ ಇರುವಾಗಲೆ, ಅಭಿಮಾನಿಗಳ ಅಭಿಯಾನ ಶುರು..!
  • PublishedDecember 8, 2021

ಅಪ್ಪು ನಮ್ಮನ್ನು ಬಿಟ್ಟು ಹೋದ ದಿನದಿಂದಲೂ​ ಅವರನ್ನು ನೆನೆಪಿಸಿಕೊಂಡಿರದ ದಿನವೇ ಇಲ್ಲ. ಮರೆಯಬೇಕೆಂದರೂ ಮರೆಯಲಾಗದ ನೋವು ಇದು. ಅಪ್ಪು ಅವರು ನಮ್ಮೊಂದಿಗೆ ಇಲ್ಲ ಅನ್ನುವ ಸುದ್ದಿಯನ್ನು ಇನ್ನೂ ನಂಬಲು ಆಗುತ್ತಿಲ್ಲ. ಫ್ಯಾನ್ಸ್​ಗಳು ಪ್ರತಿದಿನ ಕಣ್ಣೀರು ಹಾಕುತ್ತಿದ್ದಾರೆ.

ಡಿಸೆಂಬರ್​ 6ರಂದು ಅಪ್ಪು ಅವರ ಡ್ರೀಮ್​ ಪ್ರಾಜೆಕ್ಟ್ ಗಂಧದಗುಡಿ ಟೀಸರ್​ ಬಿಡುಗಡೆಯಾಗಿತ್ತು. ಇದನ್ನು ಕಂಡ ಅಭಿಮಾನಿಗಳು ದೇವರಿಗೆ ಮತ್ತೆ ಹಿಡಿಶಾಪ ಹಾಕಿದ್ದರು. ಇಂತಹ ವ್ಯಕ್ತಿಯನ್ನು ಬೇಗ ಕರೆದುಕೊಂಡಿದ್ದೀರ ಯಾಕೆ ಎಂದು ಅಳಲು ತೋಡಿಕೊಂಡಿದ್ದರು. ಗಂಧಗ ಗುಡಿ ಟ್ರೈಲರ್​ ಟ್ರೆಂಡಿಗ್​ನಲ್ಲಿದೆ. ತಮ್ಮ ನೆಚ್ಚಿನ ನಟನ ಅದ್ಭುತ ಕಲ್ಪನೆಗೆ ಬೆರಗಾಗಿದ್ದ ಅಭಿಮಾನಿಗಳು ಮೂಕ ವಿಸ್ಮಿತರಾಗಿದ್ದರು. ಇಂತಹ ಸಂದರ್ಭದಲ್ಲಿ ಪವರ್‌ಸ್ಟಾರ್ ನಮ್ಮೊಂದಿಗಿಲ್ಲವಲ್ಲ ಅಂತ ಮರುಗಿದ್ದರು.

ಆದರೆ, ‘ಗಂಧದ ಗುಡಿ’ ಮತ್ತೆ ಪುನೀತ್ ಅಭಿಮಾನಿಗಳಿಗೆ ಬದುಕಿಗೆ ಹೊಸ ಬೆಳಕಾಗಿದೆ.ಅಪ್ಪು ಅಭಿಮಾನಿಗಳು ಪುನೀತ್ ರಾಜ್​ಕುಮಾರ್​ ತೋರಿಸ ಕೊಟ್ಟ ದಾರಿಯಲ್ಲಿ ನಡೆಯುತ್ತಿದ್ದಾರೆ. ಅಪ್ಪು ಅವರನ್ನು ಜೀವಂತವಾಗಿರಸುವ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೀಗ ಅಪ್ಪು ಅಭಿಮಾನಿಗಳು ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ. ಪುನೀತ್ ರಾಜ್​​ಕುಮಾರ್ ಅವರ ಜನ್ಮ ದಿನಕ್ಕೆ 100 ದಿನ ಬಾಕಿ ಇದೆ. ಹೀಗಾಗಿ ಅಭಿಮಾನದ ಅಭಿಯಾನವನ್ನು ಅಪ್ಪು ಅಭಿಮಾನಿಗಳು ಶುರುಮಾಡಿದ್ದಾರೆ. 

ಸ್ಟಾರ್ ನಟರ  ಹುಟ್ಟುಹಬ್ಬ ಹೇಗಿರುತ್ತೆ ಅನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಒಂದು ವಾರದ ಮುನ್ನವೇ ತಮ್ಮ ಅಚ್ಚು ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡುವುದಕ್ಕೆ ಅಭಿಮಾನಿಗಳೇ ಸಜ್ಜಾಗುತ್ತಾರೆ. ಬ್ಯಾನರ್‌ಗಳನ್ನು ಸಿದ್ಧಪಡಿಸುತ್ತಾರೆ. ಕೇಕ್, ಹೂವಿನ ಹಾರಗಳಿಗೆ ವಾರ ಮುಂಚೇ ಆರ್ಡರ್ ಕೊಟ್ಟು ಬಿಡುತ್ತಾರೆ. ಆದ್ರೀಗ ಅಪ್ಪು ಬರ್ತ್‌ಡೇ 100 ದಿನಗಳಿರುವಾಗಲೇ ಅಭಿಮಾನಿಗಳು ಪುನೀತ್ ನೆನೆಯಲು ಆರಂಭಿಸಿದ್ದಾರೆ. 100 ದಿನ ಬಾಕಿ ಇರುವಾಗಲೇ ಪೋಸ್ಟರ್​​ವೊಂದನ್ನು ರಿಲೀಸ್​ ಮಾಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

****

Written By
Kannadapichhar

Leave a Reply

Your email address will not be published. Required fields are marked *