ಅಪ್ಪುಗೆ ಭಾವುಕರಾಗಿ ನಮನ ಸಲ್ಲಿಸಿದ 100 ಚಿತ್ರತಂಡ!

ಇಂದು ಎಸ್ ಆರ್ ವಿ ಥಿಯೇಟರ್ ನಲ್ಲಿ ರಮೇಶ್ ಅರವಿಂದ್ ಹಾಗೂ ರಚಿತಾ ರಾಮ್ ನಟನೆಯ ‘100’ ಚಿತ್ರದ ಸುದ್ದಿಘೋಷ್ಠಿ ನಡೆಯಿತು, ಸುದ್ದಿಘೋಷ್ಠಿಗೂ ಮುನ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಮಾತನಾಡಿ, ಪುನೀತ್ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.
‘‘ಪುನೀತ್ ಜೊತೆಗಿನ ಮೊದಲ ಸಿನಿಮಾದ ವೇಳೆ ಜೊತೆಯಾಗಿದ್ದೆವು. ಕೊನೆಯದಾಗಿ ಗುರುಕಿರಣ್ ಮನೆಯಲ್ಲಿ ಎರಡು ಘಂಟೆ ಮಾತನಾಡಿದ್ದೆವು. ಅಂದು ಕಣ್ಣಿನಲ್ಲಿ ಕಣ್ಣಿಟ್ಟು ಮಾತಾಡಿದ ವ್ಯಕ್ತಿ, ಮರುದಿನ ಕಣ್ಣನ್ನು ದಾನ ಮಾಡಿದ್ದು ಅಂದರೆ ನಂಬೋಕೆ ಆಗಲ್ಲ’’ ಎಂದು ರಮೇಶ್ ತಮಗಾದ ಆಘಾತವನ್ನು ವಿವರಿಸಿದ್ಧಾರೆ. ಬುದ್ದ ಒಂದು ಮಾತು ಹೇಳುತ್ತಾನೆ. ನಾವು ಜೀವನದಲ್ಲಿ ತುಂಬ ಇಷ್ಟಪಡೋದನ್ನ ಒಂದು ದಿನ ಕಳೆದುಕೊಳ್ಳುತ್ತೇವೆ ಅನ್ನೋ ವಿಷಯದ ಬಗ್ಗೆಯೂ ಅಂದು ಚರ್ಚೆ ಮಾಡಿದ್ದೆವು. ಎಲ್ಲವನ್ನೂ ಒಂದು ದಿನ ಕಳ್ಕೋತೀವಿ ಅಂತ ಅನಿರುದ್ ಹೇಳಿದ್ದರು. ಅಪ್ಪು ಬಿಟ್ಟ ಜಾಗವನ್ನ ತುಂಬೋದು ಬಹಳ ಕಷ್ಟ. ಅವರ ನೆನಪಲ್ಲಿ ನಾವು ಕಾಲ ಕಳಿಬೇಕು ಎಂದು ರಮೇಶ್ ನುಡಿದಿದ್ಧಾರೆ.
ರಮೇಶ್ ಅರವಿಂದ್ ಮಾತನಾಡುತ್ತಾ, ನಟ ಪುನೀತ್ ಸ್ಥಾನವನ್ನು ತುಂಬುವುದು ಬಹಳ ಕಷ್ಟ. ಪುನೀತ್ ರಾಜ್‌ಕುಮಾರ್ ನೆನಪಲ್ಲೇ ಕಾಲ ಕಳೀಬೇಕು. ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯ ಡ್ಯಾನ್ಸ್ ಸಿಗಬಹುದು. ಒಳ್ಳೆಯ ನಟ, ಒಳ್ಳೆಯ ವ್ಯಕ್ತಿಯೂ ನಮಗೆ ಸಿಗಬೇಕು. ಎಲ್ಲಾ ಗುಣ ಹೊಂದಿದ್ದ ಅಪ್ಪುರಂತಹವರು ಸಿಗೋದಿಲ್ಲ ಎಂದು ಹೇಳಿದ್ದಾರೆ. ಚಿತ್ರತಂಡವು ಸುದ್ದಿಗೋಷ್ಠಿಗೂ ಮುನ್ನ ಮೌನಾಚರಣೆ ಮಾಡಿ, ಗೌರವ ಸಲ್ಲಿಸಿದೆ.
****